ಮತ್ತೆ ಬರೆಯಬೇಕು ಅನಿಸುತಿದೆ..

ಕಾಯುತ್ತಿರುವೆ ನಾ ನಿನಗಾಗಿ :-)
ಎಷ್ಟೋ ದಿನಗಳ ಕಾಯುವಿಕೆಯ ನಂತರ
ಮೊದಲ ಮಳೆಯ ಸಿಂಚನ,
ಹಳೆಯ ನೆನಪುಗಳ ಆಲಿಂಗನ
ಜೊತೆಯಲ್ಲಿ ನೀನಿಲ್ಲದೆ
ಆವರಿಸಿದ ನೀರಸ ಮೌನ..
ಮಳೆ ಇಳೆಯ ಸೇರುವಂತೆ
ಮತ್ತೆ ನಿನ್ನ ಸೇರಬೇಕೆಂಬ ಬಯಕೆ
ಎಳೆಯ ಮೇಲೆ ಹನಿಗಳು ಜಾರುವಂತೆ
ನಿನ್ನ ಕೆನ್ನೆಯ ಹಿತವಾಗಿ ಚುಂಬಿಸಲೇ ?
ನವಿರಾದ ಆ ಮುಂಗುರುಳ ಲಾಸ್ಯ
ನೋಡುತ್ತ ಸಮಯವ ಮರೆತ ಆ ಕ್ಷಣ
ಪರಿಜ್ಞಾನವಿಲ್ಲದೆ ಪರವಶವಾದ ಆ ಮನ
ಕೋಲ್ಮಿಂಚು ಸುಳಿದು ಹೋದಂತೆ
ನಿನ್ನ ಮೊಗದಲ್ಲಿ ಆವರಿಸಿದ ಆ ತಲ್ಲಣ
ಮತ್ತೆ ಎಂದು ಸಿಗುವಿಯೋ ಎಂದು
ನಿಡುಸುಯಿದ ಸಾಂತ್ವನ,
ವಿರಹದ ಪುನರಾಗನ
ಬೇಡವೆಂದರೂ ಮತ್ತೆ ಮತ್ತೆ ಕಾಡುವ
ಆ ದಿನಗಳ ಮಧುರ ನೆನಪುಗಳ
ಮೆಲುಕಿನಲ್ಲೆ ನಿನ್ನ ಹಾದಿಯ
ಕಾಯಬೇಕೆಂಬ ಹಂಬಲ..
ಮುಗಿದಿರಳಿಕ್ಕಿಲ್ಲ ನಮ್ಮ ಸಂಭಂದದ ಋಣ
ಹುಚ್ಚು ಮನಸಿಗೆ ಎಲ್ಲಿದೆ ಕಡಿವಾಣ ??
ಮತ್ತೆ ಪ್ರೀತಿಯಾಗಬೇಕು ಅನಿಸುತಿದೆ ಈ ಕ್ಷಣ
ಓ ನನ್ನ ಹುಡುಗಿ
ಕಾಯುತ್ತಿರುವೆ ನಾ ನಿನಗಾಗಿ :-) :-)
No comments:
Post a Comment