Friday, 28 June 2013

ಸಿಹಿ ಕನಸು..:-)



ಚುಂಬಿಸಿದಳು ನನ್ನ ಚೆಲುವೆ
ನನ್ನ ಕೆನ್ನೆಯ
ನನಗೆ ಗೊತ್ತಾಗದಂತೆ,

ನಾ ಸುಧಾರಿಸಿಕೊಳ್ಳುವ ಮೊದಲೇ
ನನ್ನಿಂದ ತಪ್ಪಿಸಿಕೊಂಡಳು
ಸುಕೋಮಲ ನಗುವ ಬೀರುತ

ಮತ್ತೊಮ್ಮೆ ಆ ಮೈ ನವಿರೇಳಿಸುವ
ಕ್ಷಣ ಘಟಿಸಬೇಕೆಂದು
ಕಾದು ಕುಳಿತಿದೆ ಮನ
ನಿನ್ನ ನೆನಪಿನ ದಾರಿಯಲ್ಲಿ

ನೀ ಸನಿಹವಿದ್ದಾಗ
ನನ್ನಲ್ಲಿದ್ದ ಆ ಪರವಶತೆ
ನಿನ್ನ ಪರಿಮಳ
ನನ್ನನ್ನು ಇನ್ನೂ
ನಿನ್ನ ಮೋಹದ
ಮತ್ತಲ್ಲಿ ತೇಲಿಸುತಿದೆ

ಮತ್ತೆ ನೀ ಬರುವೆ
ಎಂದು ತಿಳಿದಿದೆ
ಇಷ್ಟೇ ವಿನಂತಿ
ಕಾಯಿಸಬೇಡ ನನ್ನ ಓ ಪ್ರಿಯ :-)

Friday, 26 April 2013



ಮತ್ತೆ ಬರೆಯಬೇಕು ಅನಿಸುತಿದೆ..
















ಕಾಯುತ್ತಿರುವೆ ನಾ ನಿನಗಾಗಿ :-)

ಎಷ್ಟೋ ದಿನಗಳ ಕಾಯುವಿಕೆಯ ನಂತರ
ಮೊದಲ ಮಳೆಯ ಸಿಂಚನ,
ಹಳೆಯ ನೆನಪುಗಳ  ಆಲಿಂಗನ
ಜೊತೆಯಲ್ಲಿ ನೀನಿಲ್ಲದೆ
ಆವರಿಸಿದ ನೀರಸ ಮೌನ..

ಮಳೆ ಇಳೆಯ ಸೇರುವಂತೆ
ಮತ್ತೆ ನಿನ್ನ ಸೇರಬೇಕೆಂಬ ಬಯಕೆ
ಎಳೆಯ ಮೇಲೆ ಹನಿಗಳು ಜಾರುವಂತೆ
ನಿನ್ನ ಕೆನ್ನೆಯ ಹಿತವಾಗಿ ಚುಂಬಿಸಲೇ ?

ನವಿರಾದ ಆ ಮುಂಗುರುಳ ಲಾಸ್ಯ
ನೋಡುತ್ತ ಸಮಯವ ಮರೆತ ಆ ಕ್ಷಣ
ಪರಿಜ್ಞಾನವಿಲ್ಲದೆ ಪರವಶವಾದ ಆ ಮನ
ಕೋಲ್ಮಿಂಚು ಸುಳಿದು ಹೋದಂತೆ
ನಿನ್ನ ಮೊಗದಲ್ಲಿ ಆವರಿಸಿದ ಆ ತಲ್ಲಣ

ಮತ್ತೆ ಎಂದು ಸಿಗುವಿಯೋ ಎಂದು
ನಿಡುಸುಯಿದ ಸಾಂತ್ವನ,
ವಿರಹದ ಪುನರಾಗನ
ಬೇಡವೆಂದರೂ ಮತ್ತೆ ಮತ್ತೆ ಕಾಡುವ
ಆ ದಿನಗಳ ಮಧುರ ನೆನಪುಗಳ
ಮೆಲುಕಿನಲ್ಲೆ ನಿನ್ನ ಹಾದಿಯ
ಕಾಯಬೇಕೆಂಬ ಹಂಬಲ..  


ಮುಗಿದಿರಳಿಕ್ಕಿಲ್ಲ ನಮ್ಮ ಸಂಭಂದದ ಋಣ
ಹುಚ್ಚು ಮನಸಿಗೆ ಎಲ್ಲಿದೆ ಕಡಿವಾಣ ??
ಮತ್ತೆ ಪ್ರೀತಿಯಾಗಬೇಕು ಅನಿಸುತಿದೆ ಈ ಕ್ಷಣ
ಓ ನನ್ನ ಹುಡುಗಿ
ಕಾಯುತ್ತಿರುವೆ ನಾ ನಿನಗಾಗಿ :-) :-)