Monday, 25 June 2012

ಇಂದು  ಮಧ್ಯಾಹ್ನ  ಒಬ್ಬಳನ್ನು ಕಂಡೆ , ಮಾತಾನಾಡಿಸಿದೆ. ಆಕೆ ತುಂಬಾ ಮುಗ್ದೆ,  ಆ ನಯನ  ಮನೋಹರಿಯ ಕುರಿತು ಈ ಕವನ ...


ನಿನ್ನ ಪರಿಚಯಸ್ಥನಂತೆ ಮಾತನಾಡಿ,
ನಿನ್ನೊಡನೆ ನಾನಾದೆ ಒಡನಾಡಿ.

ಏಕೋ ತಿಳಿಯದು ನಿನ್ನೊಡನೆ ಈ ಸಲುಗೆ ,
ಮತ್ತೆ ನಿನ್ನ ನೋಡಬೇಕೆಂಬ  ಹೆಬ್ಬಯಕೆ.

ಅಷ್ಟು ಹೊತ್ತು ನಿನ್ನೊಡನೆ ನಾ ಕಳೆದರೂ ,
ನೆನಪಿಲ್ಲ ನನಗೆ ನಿನ್ನ ಚಹರೆ.

ಹಂಬಲಿಸುತಿದೆ ಈ  ಮನಸು,
ಮತ್ತೊಮ್ಮೆ ನೀ  ನನಗೆ  ಸಿಗಲು,
ಮನಸು ಬಿಚ್ಚಿ ಮಾತನಾಡಲು.

ಬಲಿಯಾದೆನೆ ನಾನು ಈ ಹುಚ್ಚು ಪ್ರೀತಿಗೆ ,
ವಿವರಿಸಲಸಾಧ್ಯವಾದ   ಅದರ ರೀತಿಗೆ. 

ಸಾಕು ನನಗೆ ಈ ನಿನ್ನ ನೆನಪ ಮೆಲುಕು ,
ಕಾಣುತಿರುವೆ ಅದರಲ್ಲಿ ನಿನ್ನ ಕಣ್ಣ ಹೊಳಪು...



.......ರಂಜಿತ್   
      

Friday, 15 June 2012

                               

                                 ನಿನದೇ  ನೆನಪು ದಿನವೂ  ಮನದಲ್ಲಿ
                                 ನೋಡುವ  ಆಸೆಯು ತುಂಬಿದೆ  ನನ್ನಲಿ  ನನ್ನಲಿ ...

                                              ಇಲ್ಲಿ  ನಾನು  ಬರೆಯುವ ಪ್ರತಿಯೊಂದು ಅಕ್ಷರವು
                                               ನನಗೆ  ನಿನ್ನ  ಮೇಲಿರುವ ಒಲವಿನ  ನಿದರ್ಶನ ....

                                  ಎಂದೆಂದಿಗೂ ನಿನ್ನವ ...
                                  ರಂಜಿತ್ ..